ಪ್ರೀತಿಯ ಹುಡುಕಾಟದಲ್ಲಿ ಗೋವಿಂದ ಗೋವಿಂದ ಎಂದು ನಾಲ್ಕು ಹುಡುಗಿಯರ ಬೆನ್ನ ಹಿಂದೆ ಬೀಳುವ ನಾಯಕ ನಟ ಕೋಮಲ್ ಕುಮಾರ್ ಕೊನೆಗೂ ಪ್ರೀತಿಯನ್ನು ಪ್ರೀತಿಯಿಂದಲೇ ಗೆದ್ದು ಬಿಡುವ ಈ ಹಾಸ್ಯಮಯ ಕೌಟುಂಬಿಕ ಚಿತ್ರ ’ಗೋವಿಂದಾಯ ನಮಃ’ ಸುರೇಶ್ ಅವರ ನಿರ್ಮಾಣದಲ್ಲಿ ಇತ್ತೀಚೆಗಷ್ಟೆ ಡಬ್ಬಿಂಗ್ ಮುಗಿಸಿ ಗುರುಕಿರಣ್ ಅವರ ಸ್ಟುಡಿಯೋದಲ್ಲಿ ರಿರೇಕಾರ್ಡಿಂಗ್ ಕೆಲಸಕ್ಕೆ ಸಜ್ಜಾಗಿದೆ.
ಇದೊಂದು ಮನಮುಟ್ಟುವ ಹಾಸ್ಯ ಉಕ್ಕುವ ಸಂಭಾಷಣೆಯಿಂದ ಕೂಡಿರುವ ಚಿತ್ರಕತೆ ಎಂದು ನಿರ್ದೇಶಕ ಪವನ್ ವಾಡಿಯಾರ್ ತಮ್ಮ ಮೊದಲ ಪ್ರಯತ್ನದಲ್ಲಿ ತಿಳಿಸುತ್ತಾರೆ. ಇದಕ್ಕಾಗಿ ಅವರು ತಮ್ಮ ವೃತ್ತಿ ಜೀವನದಿಂದ ರಜೆ ಪಡೆದು ನಿರ್ದೇಶನಕ್ಕೆ ದುಮುಕಿದ್ದಾರೆ. ನಿರ್ಮಾಪಕ ಸುರೇಶ್ ಅವರ ಪ್ರಕಾರ ಈ ಚಿತ್ರವು ಕಾಮಿಡಿ, ಪ್ರೀತಿ, ಸಾಹಸ ಎಲ್ಲವೂ ಒಳಗೊಂಡಿದ್ದು ಸಿನಿಮಾ ಪ್ರೇಕ್ಷಕನಿಗೆ ಉತ್ತಮ ಚಿತ್ರವಾಗಲಿದೆ.
ಕೋಮಲ್ ಕುಮಾರ್ ಜೊತೆಗೆ ನಾಯಕಿಯರಾಗಿ ಮಧುಲಿಕಾ, ರೇಖಾ, ಪಾರುಲ್ ಯಾಸ್ ಹಾಗೂ ವಿದೇಶಿ ಬೆಡಗಿ ಹೀನ ಬಾರ್ಬರ ಅಭಿನಯಿಸಿದ್ದಾರೆ. ವಿನಾಯಕ್ ಜೋಶಿ ಸಹ ಮುಖ್ಯ ಪಾತ್ರದಲ್ಲಿ ಅಭಿನಯ ಮಡುತ್ತಿದ್ದಾರೆ. ಸುರೇಶ್ ಬಾಬು ಅವರ ಛಾಯಾಗ್ರಹಣ ಇರುವ ಈ ಚಿತ್ರ ಗುರುಕಿರಣ್ ಅವರ ಸಂಗೀತವನ್ನು ಹೊಂದಿದೆ.